ನಾವು ನಾವಾಗಿರೋಣ ಬನ್ನಿ
ಈ ಬದುಕುವುದು ಅಂದ್ರೆ ಏನು ? ಉಸಿರಾಡೋದು ಅಂತಾನ ? ಖುಷಿಯಾಗಿರೋದಾ? ಯಾಕೆ ಇಷ್ಟೊಂದು ವ್ಯಾಖ್ಯಾನಗಳು ಈ 'ಬದುಕು ' ಅನ್ನುವ ಶಬ್ಧಕ್ಕೆ ?ಹಲವರಿಗೆ ಕೊನೆಯವರೆಗೂ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಅನಿವಾರ್ಯತೆ ಯಾಕೆ ಬರೋದೆ ಇಲ್ಲ.. ಹಾಗೆ ನೋಡಿದರೆ ಇಂತಹ ಪ್ರಶ್ನೆಯೂ ಒಂದಿದೆ ಅಂತ ಕೂಡ ಗೊತ್ತಿರಲ್ಲ.. ಅವರೆಲ್ಲಾ ಅದೃಷ್ಟವಂತರಾ ಇಲ್ಲಾ ದುರಾದೃಷ್ಟವಂತರಾ ??ಎಲ್ಲರ ಹುಟ್ಟಿಗೂ ಒಂದು ಉದ್ದೇಶ ಇರುತ್ತಾ ?ಆ ಉದ್ದೇಶದ ಸಾರ್ಥಕತೆಯೇ ಬದುಕಾ?life is beautiful ..life is a teacher.. you are my life ಎನ್ನುವ ಅನುಭವಗಳ ಮೂಲ ಯಾವುದು ಅಂತ ಹುಡುಕುವ ಆಸೆ ಬಂದಿದೆ.. ಸಂತೋಷವಾದಾಗ life is beautiful.. ದುಃಖವಾದಾಗ life is a teacher... ಅನ್ನೋದಾದರೆ, ನಮ್ಮ ಮನಸ್ಥಿತಿ ಅನ್ನೋದೇ ಬದುಕಾ ?ಬದುಕಿಗೆ ಬೇರೆ ಅಸ್ತಿತ್ವವೇ ಇಲ್ವಾ ಹಾಗಿದ್ರೆ?
ಈ ಉತ್ತರ ಹುಡುಕುವ ಹಠಕ್ಕೆ ಬಿದ್ದಮೇಲೆ ಒಂದಂತೂ ಅರಿವಾಗಿದೆ..." ನಾನೇ ನನ್ನ ಬದುಕು..ನನ್ನನು ನಾನು ಅರಿತರೆ ಬದುಕನ್ನು ಅರಿತಂತೆ "!ಇಲ್ಲ!!ಹೇಳಿದಷ್ಟು ಸುಲಭವಿಲ್ಲ ..ಇದು ಎಷ್ಟು ಸರಳವೋ ಅಷ್ಟೇ ಜಟಿಲ .. ಇಲ್ಲಿಂದ ಗೊಂದಲಗಳು ಶುರುವಾಗುತ್ತವೆ .. "ನನ್ನನ್ನು" ತಲುಪಲು ನೂರಾರು ಮಜಲುಗಳು.. . ಸುತ್ತಲಿನ ಜಗತ್ತು ಅರ್ಥಹೀನ ಅನ್ನಿಸಲು ಶುರುವಾಗುತ್ತದೆ ..ಇಲ್ಲಿಯವರೆಗೆ ಒಪ್ಪಿಕೊಂಡು ಪಾಲಿಸಿಕೊಂಡು ಬಂದಿದ್ದ ಧರ್ಮ ,ಆದರ್ಶ ,ಸಮಾಜ ,ಬೇರೆಯವರ ಅನುಭವಗಳ ಮೇಲೆ ಒಪ್ಪಿಕೊಳ್ಳಲ್ಪಟ್ಟ ಕಾನೂನುಗಳು ಹೇರಿಕೆ ಅನ್ನಿಸ ತೊಡಗುತ್ತದೆ.
ನಮ್ಮ "ಅಸ್ತಿತ್ವ" ಅಗಾದ ಅನುಭವಗಳ ಸಂಗ್ರಹ.. ಇವತ್ತಿನ "ನಾನು" ಎಷ್ಟೊಂದು ಘಟನೆಗಳ ಫಲಿತಾಂಶ ! ಹುಟ್ಟಿದಾಗಿನಿಂದ ಎಷ್ಟೊಂದು ಜನರು , ಎಷ್ಟೊಂದು ಘಟನೆಗಳು, ಆಯ್ಕೆಗಳು , ಸೋಲುಗಳು ,ಗೆಲುವುಗಳು ,ಭಯಗಳು "ನಮ್ಮನ್ನು " ರೂಪಿಸಿರುತ್ತವೆ ಅಲ್ವಾ ? ನಮಗೇ ಗೊತ್ತಿಲ್ಲದ ಹಾಗೆ ನೂರಾರು ಅನುಭವಗಳು ನಮಗಾಗಿ ಒಂದು ಬದುಕನ್ನು ಹೆಣೆಯುತ್ತಾ ಹೋಗುತ್ತದೆ. ನಮ್ಮಂಥಹ ಇನ್ನೂ ಒಂದಷ್ಟು ಅನುಭವಗಳ ಮೂಟೆಗಳ ಜೊತೆ ಸೇರಿ,ಸಮಾಜ ಎನ್ನುವ ವ್ಯವಸ್ಥೆಯೊಳಗೆ ಸೇರಿ ಹೋಗ್ತ್ತೇವೆ .. ಅಲ್ಲಿಂದ ಸಮಸ್ಯೆಗಳು ತೀವ್ರವಾಗುತ್ತ ಹೋಗುತ್ತವೆ. ಅಲ್ಲಿಂದ ಎಲ್ಲವೂ ಸಮಾಜದ ತೀರ್ಪಿನ ಮೇಲೆ ನಿರ್ಧರಿಸಲ್ಪಡುತ್ತದೆ ... "ಸಮಾಜದಲ್ಲಿ ತಲೆ ಎತ್ತ್ಕೊಂಡು ಓಡಾಡಬೇಕು " " ನಾಲ್ಕು ಜನ ನಮ್ಮನ್ನ ಹೊಗಳಬೇಕು " .ಹೀಗೆ ನಾವೇ ಸೃಷ್ಟಿಸಿಕೊಂಡ ಸಮಾಜದಲ್ಲಿ..ನಾವೇ ಬಂಧಿಗಳಾಗುತ್ತೇವೆ ..ಇದು ನಮ್ಮದೇ ಸೃಷ್ಟಿ ಅನ್ನುವುದನ್ನೂ ಮರೆತು ಅದರ ಗುಲಾಮರಾ ಗಿಬಿಡುತ್ತೇವೆ.. ಸರಿ ತಪ್ಪುಗಳ ಅಂತರವೇ ಗೊತ್ತಿರದೇ ಯಾರದೋ ಅನುಭವಗಳನ್ನು ಸತ್ಯವೆಂದೂ , ಅದನ್ನೆಂದೂ ಪ್ರಶ್ನಿಸಬಾರದೆಂದೂ ನಮಗೆ ತಾಕೀತು ಮಾಡಲಾಗಿರುತ್ತದೆ .. ಹೀಗೆ ಅದು ಮುಂದಿನ ಪೀಳಿಗೆಗೂ ವರ್ಗಾವಣೆಯಾಗುತ್ತದೆ.. ಹಾಗಂತ ನಾನು ವ್ಯವಸ್ಥೆಯ ವಿರೋಧಿ ಅಲ್ಲ ... ನನ್ನ ಪ್ರಶ್ನೆ ಸಮಾಜದ ಹೆಸರಿನಲ್ಲಿ ನಡೆಯುವ ಶೋಷಣೆಗೆ..!
"ಇಲ್ಲಿಯವರೆಗೆ ನಮ್ಮಲ್ಲಿ ಯಾರು ಅಂತರ್ಜಾತಿ ಮದುವೆ ಆಗಿಲ್ಲ ಹಾಗು ಅದನ್ನು ನಮ್ಮ ಸಮಾಜ ಒಪ್ಪಿಕೊಳ್ಳುವುದಿಲ್ಲ "ಎಂದೋ ಅಥವಾ "ಇಷ್ಟೆಲ್ಲಾ ಖರ್ಚು ಮಾಡಿ, ಇಂಜಿನಿಯರ್ ಮಾಡಿದ್ರೆ ಆಕ್ಟರ್ ಆಗ್ತೀನಿ ಅಂತ್ಯಲ ? ಸೋಶಿಯಲ್ ಸ್ಟೇಟಸ್ ಬಗ್ಗೆ ಯೋಚ್ಸಿದ್ಯಾ?" ಎಂದೋ ಸಮಾಜವನ್ನು ಎಳೆದು ತರುತ್ತಲೇ ಇರುತ್ತೇವೆ .. ನಮ್ಮನ್ನು ಪೋಷಿಸ ಬೇಕಾದ ಸಮಾಜ ನಮ್ಮ ಕನಸುಗಳನ್ನು ಕೊಲ್ಲುತ್ತಾ ಹೋಗುತ್ತದೆ .. ಇದಕ್ಕೆ ಹೊಣೆ ಯಾರು ?ನಾವೇ ಅಲ್ವಾ? ಕೇವಲ ಹಳೆಯ ಅನುಭವಗಳೇ ಬದುಕು ಅಲ್ಲ ಅಲ್ವಾ? ಒಂದು ಜೀವವನ್ನು ಸೃಷ್ಟಿ ಮಾಡುವ ಶಕ್ತಿ ಇರುವ ಮನುಷ್ಯನಿಗೆ ಹೊಸ ಅನುಭವಗಳನ್ನು ಸೃಷ್ಟಿಸಿಕೊಳ್ಳಲು ಸಮಾಜದ ಒಪ್ಪಿಗೆಯ ಮೊಹರಿನ ಅವಶ್ಯಕತೆಯಾದರೂ ಏಕೆ ಬೇಕಾಗುತ್ತೆ?
ಒಮ್ಮೆ ಈ ಸಮಾಜದ ಪರಿಧಿಯಿಂದ ಹೊರಬಂದು ಯೋಚಿಸೋಣ.. ಈ ಎಲ್ಲ ಹೇರಿಕೆಗಳಿಂದ ಒಮ್ಮೆ ನಮ್ಮನ್ನು ಮುಕ್ತಗೊಳಿಸಿಕೊಳ್ಳುವ ಬಗ್ಗೆ ಯೋಚಿಸೋಣ.. ಸರಿ ಅಲ್ಲ ಅನ್ನಿಸಿದ್ದನ್ನು ಪ್ರಶ್ನೆ ಮಾಡಿ ನೋಡೋಣ... " ನಮ್ಮನ್ನು" ನಾವಗಿಸಿಯೇ ಇಟ್ಟುಕೊಳ್ಳಲು ಒಮ್ಮೆ ಪ್ರಯತ್ನಿಸೋಣ .. ಹಾಗೆ ಸಾವಿರಾರು "ನಾನು " ಬೆಳೆಯಲು ಅವಕಾಶ ಕಲ್ಪಿಸಿಕೊಡೋಣ .. ಬರಿ ಇಂಥಹ ಒಂದು ಕಲ್ಪನೆಯೇ ಎಷ್ಟು ಹಿತ ಕೊಡುತ್ತೆ ಅಲ್ವಾ?
ನಿಜ. ಬದುಕು ಒಂದು ಡಾಂಬರಿಸಿದ ರಸ್ತೆ ಅಲ್ಲ. ಇದೇ ದಾರಿ ಎಂಬ ಮಿತಿಯಲ್ಲಿ ಚಲಿಸುವ ಅಗತ್ಯವೂ ಇಲ್ಲ. ಹೀಗೆ ಹೋಗುವುದು ಬೇಡ ಎಂದು ದಿಕ್ಕು ಬದಲಿಸುವ ಯತ್ನ ತಪ್ಪಲ್ಲ. ಹೀಗೇ ಆಗುತ್ತದೆ ಎಂಬ ಬರೆದಿಟ್ಟ ಫಲಗಳಿಲ್ಲ. ಅದು ಒಡ್ಡುವ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಳ್ಳುವುದರಲ್ಲೇ ಒಂದು ಕೌತುಕಭರಿತ ಮಜ ಇದೆ ಅನ್ಸುತ್ತೆ. Enjoy as it comes.
ReplyDeleteಸುಂದರ ಮನೋ ವಿಶ್ಲೇಷಣೆ. :)
ReplyDeleteಎಷ್ಟು ಚೆಂದ ಬರೆದಿದ್ದೀಯಲ್ಲೇ ಹುಡುಗಿ! ನಾನಂತೂ ನಿಜವಾಗಲೂ ಸೀರಿಯಸ್ಸಾಗಿ ಓದಿದೆನಪ್ಪಾ :)
ReplyDeleteಬರೀತಾ ಇರು ಹೀಗೆ...ನಿಲ್ಲಿಸಬೇಡ..ಪ್ರಶ್ನೆಗಳನ್ನ ಕೇಳ್ತಾ ಇರು :)
- Manjula
ತುಂಬಾ ತುಂಬಾ ಥ್ಯಾಂಕ್ಸ್ ಓದಿದ್ದಕ್ಕೆ ಮಂಜುಳ :)
Deleteಚೆನ್ನಾಗಿದೆ ಜಿಜ್ಞಾಸೆ.. ಹಾಗಂತ ನಿನ್ನೊಳಗೇ ನೀನು ಹುದುಗಿಕೊಂಡರೆ ಕಷ್ಟ. :)
ReplyDeleteನನ್ನನ್ನು ನಾನು ತಲುಪಿದೆ ಎಂದ ಮೇಲೆ ಹುದುಗಿಕೊಳ್ಳುವ ಪ್ರಶ್ನೆ ಬರಲ್ಲ ಅಲ್ವಾ??ನಿಜವಾದ ನಾನು ಸಿಕ್ಕಿದ ಮೇಲೆ ಗೊಂದಲಗಳಿಗೆ ಅವಕಾಶವೇ ಇಲ್ಲ ಅನ್ಸುತ್ತೆ :)
Deleteತುಂಬಾ ಚೆನ್ನಾಗಿದೆ ..
ReplyDeletethanks a lot :)
DeleteVery well said :)
ReplyDeleteThank you 😊😊
DeleteWelcome :) waiting for more blogs :)
Delete