ನೀರಜ ನೋಡಿದಾಗ ಅನಿಸಿದ್ದು
ಸೆಪ್ಟೆಂಬರ್ ೫ ರಂದು Pan Am Flight 73 ದುರಂತದಲ್ಲಿ,೩೬೦ ಜನರ ಪ್ರಾಣ ಉಳಿಸಲು ತನ್ನ ಜೀವವನ್ನು ಬಲಿ ಕೊಟ್ಟ೨೨ ವರ್ಷದ ದಿಟ್ಟ flight attendant ಒಬ್ಬಳ ಕಥೆ.. ಹೌದು ..ಮೈ ಝುಮ್ ಎನ್ನಿಸುವ ಕಥೆ ... ಅವಳ ಧೈರ್ಯಕ್ಕೆ ,ತ್ಯಾಗಕ್ಕೆ ಒಂದು ಸಲಾಂ !! "ನಾನು ಅವಳ ಜಾಗದಲ್ಲಿದ್ದಿದ್ದರೆ" ಅನ್ನುವ ಪ್ರಶ್ನೆಯನ್ನು ಕೇಳಿ ಕೊಳ್ಳುವ ಧೈರ್ಯ ಕೂಡ ಬಹುಶಃ ನನ್ನಲ್ಲಿಲ್ಲ ! ನನ್ನನು ಕಾಡಿದ ಹಾಗು ಎಂದೆಂದಿಗೂ ಕಾಡುವ ಇನ್ನೂ ಒಂದು ವಿಷಯವಿದೆ .ಮಾಡೆಲಿಂಗ್ ಮಾಡಿಕೊಂಡು ಹಾಯಾಗಿದ್ದ ನೀರಜ ,೧೯೮೫ ರಲ್ಲಿ ತನ್ನ ೨೨ ನೇ ವಯಸ್ಸಿಗೆ ಮದುವೆಯಾಗುತ್ತಾಳೆ .. ಮದುವೆ ಹಾಗು ಅದು ಬಯಸುವ ತ್ಯಾಗಗಳ ಅರಿವಿಲ್ಲದೆ ,ಗಂಡನೊಡನೆ ಸೌದಿಗೆ ಹೋಗುತ್ತಾಳೆ.. ಕೇವಲ ೨ ತಿಂಗಳಿಗೆ ವಾಸ್ತವದ ಅರಿವಾಗಿ ಇನ್ನು ನನ್ನಿಂದ ಇದು ಸಾಧ್ಯವಿಲ್ಲ ಎಂದು ಗಂಡನನ್ನು ಬಿಟ್ಟು ಬಂದು , flight attendant ಆಗಿ ತನ್ನ ಹೊಸ ಬದುಕು ಕಟ್ಟಿ ಕೊಳ್ಳುತ್ತಾಳೆ.. ಕೊನೆಗೆ ಅಲ್ಲೇ ಅಂತ್ಯವನ್ನೂ ಕಾಣುತ್ತಾಳೆ .
ಅವಳ ಮದುವೆ ಕೇವಲ ಎರಡೇ ತಿಂಗಳಲ್ಲಿ ಯಾಕೆ ಅಂತ್ಯಗೊಂಡಿದ್ದಿರಬಹುದು ? ತಪ್ಪು ಅವಳದ್ದ ಇಲ್ಲ ಅವನದ್ದ ? ಅದೆಲ್ಲದರ ಉತ್ತರ ಗೊತ್ತಿರುವುದು ಕೇವಲ ಅವರಿಬ್ಬರಿಗೆ ಮಾತ್ರ . ನನ್ನ ಪ್ರಶ್ನೆ ಈಗ ಅದಲ್ಲ... ಅಂದು ಆಕೆ ಆ ದುರಂತದಲ್ಲಿ ಸಾಯದೆ ಇದ್ದಿದ್ದರೆ ಏನಾಗಿರುತ್ತಾ ಇತ್ತು? ಅವಳ ಬಗ್ಗೆ ಏನೆಲ್ಲಾ ಮಾತುಗಳು ಹುಟ್ಟುತ್ತಿದ್ದವು?
ಅವಳ ಅತ್ತೆ / ಚಿಕ್ಕಮ್ಮ ತಮ್ಮ ಹೆಣ್ಣು ಮಕ್ಕಳ ಕಡೆ ತರಕಾರಿಯ ತಟ್ಟೆ ತಳ್ಳುತ್ತಾ ' ಸಾಕು ಓದಿದ್ದು ,ಬೇಗ ಹೆಚ್ಚಿ ಕೊಡು ಇದ್ನ , ಇನ್ನು ಮನೆ ಕೆಲಸ ಕಲಿ ..ಇಲ್ದೇ ಇದ್ರೆ ನೀರಜ ಥರ ೨ ತಿಂಗಳು ನೆಟ್ಟಗೆ ಸಂಸಾರ ಮಾಡಲ್ಲ.. ' ಅಂತಾನೋ .. ಅಥವಾ ನೀರಜಾಳ ತಾಯಿಯ ಓರಗಿತ್ತಿ /ಅತ್ತಿಗೆ ಬಟ್ಟೆ ಹರವಿ ಹಾಕುತ್ತ ' ಅವ್ರಮ್ಮನೂ ಹೀಗೆ ಆಡ್ತಾ ಇದ್ಲು ..ಇನ್ನೆನಾಗುತ್ತೆ.. ನೂಲಿನಂತೆ ಸೀರೆ ಅನ್ತಾರಲ ಹಾಗೆ ' ಎಂದು ಅಸಮಾಧನದಿಂದ ಗೊಣಗುತ್ತಲೋ .. ಅಥವಾ ನೆರೆಹೊರೆಯ ಹೆಂಗಸರು ಬಟಾಣಿ ಬಿಡಿಸುತ್ತಾ 'ನಾನು ಅವರಮ್ಮನ ಹತ್ರ ಅವತ್ತೇ ಹೇಳಿದ್ದೆ .. ಅವಳೇನೋ ಗಂಡನ್ನ ಬಿಟ್ಟು ಬಂದ್ಲು ಅಂದ್ರೆ ನಿಮ್ಗಾದ್ರು ಬುದ್ಧಿ ಬೇಡ್ವ ?ಸರಿಯಾಗಿ ಬುದ್ಧಿ ಹೇಳಿ ಕಳ್ಸಿ ಅಂತ .. ನನ್ ಮೇಲೆ ರೆಗ್ಬಿಟ್ರು .. ಮಾಡೆಲಿಂಗ್ ಅದು ಇದು ಅಂತ ಇದ್ರೆ ಇನ್ನೇನಾಗುತ್ತೆ .. ಮನೆಗೆ ಎಷ್ಟು ಲೇಟ್ ಆಗಿ ಬರ್ತಾ ಇದ್ಲು ಗೊತ್ತ?ಇನ್ನು ಬುದ್ಧಿ ಬಂದಿಲ್ಲ ಇಷ್ಟೆಲ್ಲಾ ಆದ್ರೂ .. ಈಗೇನೋ ಏರ್ ಹೋಸ್ಟೆಸ್ ಅಂತೆ ..ಬಿಡಿ ಬೇರೆಯವರ ಸುದ್ಧಿ ನಮಗ್ಯಾಕೆ ' ಅಂತ ಇರ್ತಿದ್ರೆನೋ .. ಅಸಲಿಗೆ ನೀರಜ ಎನ್ನುವವಳೊಬ್ಬಳು ಎಲ್ಲೋ ಸ್ವಚ್ಚಂದ ಬದುಕಿನ ಕನಸು ಕಾಣುತ್ತಾ ಇದ್ದಾಳೆ ಎನ್ನುವ ವಿಷಯ ನನಗೆ - ನಿಮಗೆ ಗೊತ್ತಿರ್ತಾ ಇತ್ತ??ಇಲ್ಲ ಅಲ್ವಾ?
ಅಂದು ಎಮರ್ಜೆನ್ಸಿ ಎಕ್ಸಿಟ್ನಿಂದ ಮೊದಲು ಆಕೆ ಹೊರಗೆ ಬರಬಹುದಿತ್ತು .. ಅದನ್ನು ಸಮರ್ಥನೆ ಕೂಡ ಮಾಡಿಕೊಳ್ಳ ಬಹುದಾಗಿತ್ತು .. ಆಕೆ ಹಾಗೆ ಮಾಡಲಿಲ್ಲ .. ಮೂರು ಮಕ್ಕಳ ಜೀವ ..ತನ್ನ ಜೀವಕ್ಕಿಂತಲೂ ಅಮೂಲ್ಯ ಎನಿಸಿತ್ತು .. ಸಾವು ಕಣ್ಣ ಮುಂದಿರುವಾಗ ಇಂತಹ ನಿಸ್ವಾರ್ಥ ಮನೋಭಾವ ಕೆಚ್ಚೆದೆ ಉಳ್ಳವರಲ್ಲಿ ಮಾತ್ರ ಇರಲು ಸಾಧ್ಯ ..ಹಾಗು ಒಳ್ಳೆಯತನಕ್ಕೆ ತುಂಬಾ ಧೈರ್ಯ ಬೇಕು .ಸತ್ತ ನಂತರ ಮೂರು ಶ್ರೇಷ್ಠ ಪ್ರಶಸ್ತಿಗಳು ಆಕೆಗೆ ದೊರಕಿದವು .. ಆಕೆ ಅಂದು ಸಾಯದೆ ಇದ್ದಿದ್ದರೆ ಕೇವಲ ಒಬ್ಬ over ambitious ,career oriented divorcee ಎನ್ನುವ ಹಣೆ ಪಟ್ಟಿ ಮಾತ್ರ ಇರುತ್ತಿತ್ತ?? ಅದೆಷ್ಟು ಸಣ್ಣ ಸಣ್ಣ ಯುದ್ಧಗಳನ್ನು ಆಕೆ ಒಬ್ಬಳೇ ಎದುರಿಸಿದ್ದಿರಬಹುದು? ನಾನು ಕೇವಲ ವಿಚ್ಛೇದಿತೆ ಅಲ್ಲ ಎನ್ನುವುದನ್ನು ಜಗತ್ತಿಗೆ ತಿಳಿಸಿಕೊಡಲು ತನ್ನ ಸಾವಿನವರೆಗೂ ಕಾಯಬೇಕಾಯಿತ ?ಗೊತ್ತಿಲ್ಲ
ಬರಿ ಒಂದು ಘಟನೆಯಿಂದ ,ಬರಿ ಒಂದು ಸೋಲಿನಿಂದ ನಾವು ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನೇ ಅಳೆಯಲು ಹೊರಡುತ್ತೇವೆ .. ಅವನಿಗೊಂದು ಹಣೆಪಟ್ಟಿ ಹಚ್ಹ್ವ್ಹಿ ಬಿಡುತ್ತೇವೆ .. ತೇಜೋವಧೆಯಂತಹ ತಣ್ಣನೆ ಕ್ರೌರ್ಯಕ್ಕೆ ಇಳಿದುಬಿಡುತ್ತೇವೆ .. ನಮಗೇ ಗೊತ್ತಿಲ್ಲದೇ ಒಬ್ಬನ ಆತ್ಮವಿಶ್ವಾಸವನ್ನು ಕೊಂದ ಕೊಲೆಗಾರಾಗಿಬಿಡುತ್ತೇವೆ.. ಬದುಕೋಣ ..ಬದುಕಲು ಬಿಡೋಣ..
ಕೇವಲ ಮಾತುಗಳನ್ನಾಡುವವರು ಮತ್ತು ಅಕ್ಷರ ಕುಟ್ಟಲು ಕಲಿತವರಿಂದ (ಇವರನ್ನು ಮಾತುಬಲ್ಲವರು ಮತ್ತು ಬರಹಗಾರೆನ್ನುತ್ತಾರೆ) ಪ್ರತಿಕ್ಷಣ ಕೊಲೆಗಳಾಗುತ್ತಲೇ ಇವೆ.ನಿನ್ನ ಬರಹ ಆತ್ಮಕ್ಕೆ ತಟ್ಟಿ ಎಚ್ಚರಿಸುವಂತಿದೆ. 😊
ReplyDeleteನಿಮ್ಮ ಆಲೋಚನಾ ಧಾಟಿ ,ಶೈಲಿ ತುಂಬ ವಿಭಿನ್ನವಾಗಿವೆ. ವಿಚಾರ ಪ್ರಚೋದಕವೂ ,ಅಂತರಂಗವನ್ನು ಕಲಕುವ ನಿಮ್ಮ ಬರಹಗಳ ಪ್ರತೀಕ್ಷೆಯಲ್ಲಿ ಇನ್ನು ಮುಂದೆ ನಾನು. ಅಭಿನಂದನೆಗಳು.
ReplyDeleteGood start.
ReplyDeleteExpect more
Sushma.. what can i say.. again we both crashed each other.. e film bandu tingalaagidroo nenne taane e film nodi.. moogalli kannalli sora bara anta neeru surisikondu.. bereyavarige kaanadante orasikondu bandidde. nanagoo idda onde prashne avalu badukiddidre.. matte maduve aagi enu aagtittu annodaagittu. :) interesting flow of thoughts. (Y)
ReplyDeleteKanndada bagge nanagae edda preethi hosa thiruvu kaanithu. athi utthama vaada prasanga. Nimma manassina prashnegalige ondu salam♥️
ReplyDelete